ಆನೆ ಬಂದಿತಮ್ಮಮ್ಮ

ಆನೆ ಬಂದಿತಮ್ಮಮ್ಮ

( ರಾಗ ಶ್ರೀರಾಗ ಆದಿ ತಾಳ) ಆನೆ ಬಂದಿತಮ್ಮಮ್ಮ, ಮರಿ- ಯಾನೆ ಬಂದಿತಮ್ಮಮ್ಮ ||ಪ|| ತೊಲಗಿರೆ ತೊಲಗಿರೆ ಪರಬ್ರಹ್ಮ ಬಲು ಸರಪಣಿ ಕಡಕೊಂಡು ಬಂತಮ್ಮ ||ಅ|| ಕಪಟನಾಟಕದ ಮರಿಯಾನೆ ನಿಕಟಸಭೆಯಲಿ ನಿಂತಾನೆ ಕಪಟನಾಟಕದಿಂದ ಸೋದರ ಮಾವನ ನಕಟಕಟೆನ್ನದೆ ಕೊಂದಾನೆ ಕೀಳು ಭುವನವನುಂಡಾನೆ, ಸ್ವಾಮಿ ಬಾಲಕನೆಂಬ ಚೆಲ್ವಾನೆ ಬಲ್ಲ ಗೋವುಗಳ ಕೂಡೆ ನಲಿದಾನೆ ಚೆಲುವ ಕಾಳಿಂಗನ ಹೆಡೆಯಲಾಡುತ್ತ ಸೊಬಗ ಹೆಚ್ಚಿದ ಪಟ್ಟದಾನೆ ಮದ ಸೊಕ್ಕಿ ಬರುತಾನೆ ಭೀಮಾರ್ಜುನರನ್ನು ಗೆಲಿಸ್ಯಾನೆ ಪರಮ ಭಾಗವತರ ಪ್ರಿಯಾನೆ ಮುದದಿಂದ ಮಥುರೆಲಿ ನಿಂತಾನೆ ಮದಮುಖದ ಸುರರ ದಿಗಿಲಿಟ್ಟು ಕೊಂದು ಪದುಮಲೋಚನ ಪುರಂದರ ವಿಠಲನೆಂಬಾನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು