ಆನಂದಮಯಗೆ ಚಿನ್ಮಯಗೆ

ಆನಂದಮಯಗೆ ಚಿನ್ಮಯಗೆ

ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ|| ವೇದವ ತಂದು ಬೆಟ್ಟವ ಪೊತ್ತು ಧರಣೀಯ ಸಾಧಿಸಿ ಕಂಭದೊಳುದಿಸಿದಗೆ| ಭೂದಾನವ ಬೇಡಿ ನೃಪರ ಸಂಹರಿಸಿದ ಆದಿ ಮೂರುತಿಗೆ ಆರತಿ ಎತ್ತಿರೆ|| ಇಂದುವದನೆ ಸೀತೆ ಸಹಿತಲರಣ್ಯದಿ ನಂದಗೋಕುಲದಲ್ಲಿ ನಲಿದವಗೆ| ಮಂದಗಮನೆಯರ ಮುಂದೆ ನಿರ್ವಾಣದಿ ನಿಂದ ಮೂರುತಿಗೆ ಆರತಿ ಎತ್ತಿರೆ|| ತುರಗವನೇರಿ ದೈತ್ಯರ ಸೀಳಿ ಸುಜನರ ಪೊರೆವ ಮಂಗಳ ಹಯವದನನಿಗೆ| ವರದ ಯಾದವಗಿರಿ ಆದಿ ನಾರಾಯಣ ಚರಣ ಕಮಲಕೆ ಆರತಿ ಎತ್ತಿರೆ|| ಸೂಚನೆ: ಈ ಹಾಡನ್ನು ಹೆಚ್ಚಾಗಿ ಮಧ್ಯಮಾವತಿ ರಾಗದಲ್ಲಿ ಹಾಡುತ್ತಾರೆ.
ದಾಸ ಸಾಹಿತ್ಯ ಪ್ರಕಾರ
ಬರೆದವರು