ಆಗಲಾಗಲಿ ರಂಗಯ್ಯ

ಆಗಲಾಗಲಿ ರಂಗಯ್ಯ

( ರಾಗ ಪಂತುವರಾಳಿ ಅಟ ತಾಳ) ಆಗಲಾಗಲಿ ರಂಗಯ್ಯ, ನಿಮ್ಮಯ್ಯಗೆ ಹೋಗಿ ಹೇಳುವೆನು ನಾನು ||ಪ|| ಮೊಸರ ಕಡೆವ ವೇಳ್ಯದಿ, ನೀ ಪಿಡಿದೆಯೊ ಮಿಸುನಿಯ ಕಡೆಗೋಲ ಹಸುಮಗನೇ ನೀನು, ಮೋಸದಿ ಬಂದು ನುಸುಳದೆ ತೆರಳೆಂದಳು ಬೇರಿರಿಸಿದೆ ಮೊಸರು, ಹಾಲು ಪಾತ್ರೆ ಸಾರಿ ಹೇಳುವೆ ನಿನಗೆ ಮೀರಿ ಮುಟ್ಟಿದರೆ ನಿನ್ನ ಕಿವಿ ಮೂಗ ಮೂರು ಕೊಯ್ಯುವೆನೆಂದಳು ಗಿಂಡಿಪಾಲನು ಸುರಿದು, ರಂಗಯ್ಯ ನೀ ಕೊಂಡೆಯೇತಕೆ ಬೆಣ್ಣೆಯ ಲಂಡತನವ ಮಾಡಿದೆ, ಕಣ್ಣಿಗೆ ನಿಂಬೆ ಹಿಂಡುವೆ ತಾನೆಂದಳು ಅಡಿಗೆಯ ಮನೆಯ ಪೊಕ್ಕು, ನೊರೆಹಾಲ ಕುಡಿವುದಿದೇನು ಸೊಕ್ಕು ಬಡೆದು ಗಲ್ಲದಲಿ ನಿನ್ನ, ಕೈಗಳನು ಹಿಡಿದು ಕಟ್ಟುವೆನೆಂದಳು ಅಂದ ಮಾತನು ಕೇಳುತ, ಕೃಷ್ಣಯ್ಯ ತಾ- ನೆಂದೆಂದು ಬರೆನೆನ್ನುತ ತಂದೆ ಪುರಂದರವಿಠಲ, ಸಂಸಾರ- ದಂದಕೆ ನಗುತಿದ್ದನು
ದಾಸ ಸಾಹಿತ್ಯ ಪ್ರಕಾರ
ಬರೆದವರು