ಅಮ್ಮ ಎನ್ನ ಕೂಡ್ಯಾಡುವ ಮಕ್ಕಳು

ಅಮ್ಮ ಎನ್ನ ಕೂಡ್ಯಾಡುವ ಮಕ್ಕಳು

( ರಾಗ ಧನಶ್ರೀ ಚಾಪು ತಾಳ) ಅಮ್ಮ ಎನ್ನ ಕೂಡ್ಯಾಡುವ ಮಕ್ಕಳು ಅಣಗಿಸುವರು ನೋಡೆ ||ಪ|| ಯಾರು ಪಡೆದನೆಂಬೋರೆ, ಅಮ್ಮಯ್ಯ ದಾರು ಪಡೆದರೆಂಬೊರೆ ಕೇರಿಯ ಬೆಣ್ಣೆಯ ಕದ್ದು ತಿಂದವನೆಂದು ನಾರಿಯರು ದೂರುತಾರೆ ಕೇಳಮ್ಮ || ಮಾತೆ ನೀನಲ್ಲವಂತೆ, ಅಮ್ಮಯ್ಯ ಪಿತನು ಇಲ್ಲಿಲ್ಲವಂತೆ ಮಾತುಳನ ಬಾಧೆಗೆ ಮಧುರೆಯಿಂದಲಿ ತಂದು ಖಾತಿಗೆ ಮಾರಿದರಂತೆ ನಿಮಗೆ || ದೇವಕಿ ತಾಯಿಯಂತೆ, ಅಮ್ಮಯ್ಯ ವಸು- ದೇವನು ತಂದೆಯಂತೆ ಕಾವಜನಕ ನಮ್ಮ ಪುರಂದರ ವಿಠಲನ ಆವ ಕಾವನೆಂಬೊರೆ ಯಶೋದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು