ಅನುಭವದಡುಗೆಯ ಮಾಡಿ

ಅನುಭವದಡುಗೆಯ ಮಾಡಿ

( ರಾಗ ನಾದನಾಮಕ್ರಿಯ ಛಾಪು ತಾಳ) ಅನುಭವದಡುಗೆಯ ಮಾಡಿ, ಅದ- ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ||ಪ|| ತನುವೆಂಬ ಭಾಂಡವ ತೊಳೆದು, ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು ಘನವಾಗಿ ಮನೆಯನ್ನು ಬಳಿದು, ಅಲ್ಲಿ ಮಿನುಗುವ ತ್ರಿಗುಣದ ಒಲೆ ಗುಂಡ ನೆಡೆದು ವಿರಕ್ತಿಯೆಂಬುವ ಮಡಿಯುಟ್ಟು , ಪೂರ್ಣ ಹರಿ ಭಕ್ತಿಯೆಂಬ ನೀರನ್ನೆಸರಿಟ್ಟು ಅರಿವೆಂಬ ಬೆಂಕಿಯ ಕೊಟ್ಟು, ಮಾಯಾ ಮರವೆಂಬ ಕಾಷ್ಟವ ಮುದದಿಂದ ಸುಟ್ಟು ಕರುಣೆಂಬೊ ಸಾಮಗ್ರಿ ಹೂಡಿ, ಮೋಕ್ಷ ಪರಿಕರವಾದಂಥ ಪಾಕವ ಮಾಡಿ ಗುರು ಶರಣರು ಸವಿದಾಡಿ, ನಮ್ಮ ಪುರಂದರ ವಿಠಲನ ಬಿಡದೆ ಕೊಂಡಾಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು