ದಾಸದಾಸರ ಮನೆಯ ದಾಸಿಯರ ಮಗ ನಾನು

ದಾಸದಾಸರ ಮನೆಯ ದಾಸಿಯರ ಮಗ ನಾನು

ಬರೆದದ್ದು : ಕನಕದಾಸರು ರಾಗ : ಕಾಂಬೋದಿ ತಾಳ : ಝಂಪೆ ದಾಸದಾಸರ ಮನೆಯ ದಾಸಿಯರ ಮಗ ನಾನು ಸಾಸಿರನಾಮದೊಡೆಯ ರಂಗಯ್ಯನ ಮನೆಯ ಶಂಕುದಾಸರ ಮನೆಯ ಮಂಕುದಾಸನು ನಾನು ಮಂಕುದಾಸನು ನಾನು ಮರುಳು ದಾಸ ಸಂಕೀರ್ತನೆಯ ಮಾಡಿ ನೆನವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ದ ಬಡದಾಸ ನಾನಯ್ಯ ಕಾಳಿದಾಸರ ಮನೆಯ ಕೀಳುದಾಸ ನಾನಯ್ಯ ಆಳುದಾಸನು ನಾನು ಮೂಳದಾಸ ಫಾಳಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯ ಆಳಿನಾಳಿನ ದಾಸನಡಿದಾಸ ನಾನಯ್ಯ ಹಲವು ದಾಸರ ಮನೆಯ ಹೊಲದಾಸ ನಾನಯ್ಯ ಕುಲವಿಲ್ಲದ ದಾಸ ಕುರುಬ ದಾಸ ಛಲದಿ ನಿನ್ನ ಭಜಿಸುವವರ ಮನೆಯ ಮಾದಿಗ ದಾಸ ಸಲೆ ಮುಕ್ತಿ ಪಾಲಿಸೆನ್ನೊಡನೆಯ ಕೇಶವನೇ