ಕಂಡೆ ನಾ ತಂಡತಂಡದ ಹಿಂಡುದೈವ

ಕಂಡೆ ನಾ ತಂಡತಂಡದ ಹಿಂಡುದೈವ

ಬರೆದದ್ದು : ಕನಕದಾಸರು ರಾಗ : ನಾಟಿ ತಾಳ:ಝಂಪೆ ಕಂಡೆ ನಾ ತಂಡತಂಡದ ಹಿಂಡುದೈವ ಪ್ರಚಂಡ ರಿಪು ಗಂಡ ಉದ್ದಂಡ ನರಸಿಂಹನ ಕಂಡೆನಯ್ಯ || ಪಲ್ಲವಿ || ಘುಡಿಘುಡಿಸಿ ಕಂಬದಲ್ಲಿ ಧಡಧಡ ಸಿಡಿಲು ಸಿಡಿಯೆ ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು ಘಡಘಡನೆ ನಡುನಡುಗೆ ಘುಡಿಘುಡಿಸಿ ಸಭೆ ಬೆದರೆ ಹಿಡಿಹಿಡಿದು ಹಿರಣ್ಯಕನ ತೊಡೆಯೊಳಿಡೆ ಕೆಡಹಿದನ || ೧ || ಉರದೊಳಪ್ಪಳಿಸಿ ಅರಿ ಬಸಿರ ಸರಸರಸನೆ ಸೀಳಿ ಪರಿಪರಿಯಲಿ ಚರ್ಮ ಎಳೆದಯೆಳೆಲುವನರ ನರಕನೆ ನೆಗೆದು ನಿರ್ಗಳಿತ ಶೋಣಿತ ಸುರಿಯೆ ಹರಿಹರಿದು ಕರುಳ ಕೊರಳೊಳಿಟ್ಟವನ || ೨ || ಪುರಜನರು ಹಾಯೆಂದು ಸುರರು ಹೂಮಳೆಗೆರೆಯೆ ತರತರದಿ ವಾದ್ಯಸಂಭ್ರಮಗಳಿಂದ ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೆರೆಯೆ ಕರುಣಾಳು ಕಾಗಿನೆಲೆಯಾದಿ ಕೇಶವನ || ೩ ||