Skip to main content

ಎಂಥಾ ಬಲವಂತನೋ

ಎಂಥಾ ಬಲವಂತನೋ | ಕುಂತಿಯ ಸಂಜಾತನೋ |
ಭಾರತಿಗೆ ಕಾಂತನೋ | ನಿತ್ಯ ಶ್ರೀಮಂತನೋ || ಪಲ್ಲವಿ ||

ರಾಮಚಂದ್ರಗೆ ಪ್ರಾಣನೋ | ಅಸುರ ಹೃದಯ ಬಾಣನೋ |
ಖಳರ ಗಂಟಲ ಗಾಣನೋ | ಜಗದೊಳಗೆ ಪ್ರವೀಣನೋ || ೧ ||

ಬಂಡಿ ಅನ್ನವನುಂಡನೋ | ಬಕನ ಪ್ರಾಣವ ಕೊಂಡನೋ |
ದ್ರೌಪದಿಗೆ ಗಂಡನೋ | ಭೀಮ ಪ್ರಚಂಡನೋ || ೨ ||

ಕುಂತಿಯ ಕಂದನೋ | ಸೌಗಂಧಿಕವ ತಂದನೋ |
ಕುರುಕ್ಷೇತ್ರಕೆ ಬಂದನೋ | ಕೌರವರ ಕೊಂದನೋ || ೩ ||

ವೈಷ್ಣವಾಗ್ರಗಣ್ಯನೋ | ಸಂಚಿತಾಗ್ರಪುಣ್ಯನೋ |
ದೇವಾವರೇಣ್ಯನೋ | ದೇವಾಶರಣ್ಯನೋ || ೪ ||

ಮಧ್ವಶಾಸ್ತ್ರ ರಚಿಸಿದನೋ | ಸದ್ವೈಷ್ಣವರ ಸಲಹಿದನೋ |
ಉಡುಪಿಲಿ ಕೃಷ್ಣನ ನಿಲಿಸಿದನೋ | ಪುರಂದರ ವಿಠಲಗೆ ದಾಸನೋ || ೫ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: